ನಾ ಬಿಡಿಸಿದೆ ಚಿತ್ತಾರ

ನಾ ಬಿಡಿಸಿದೆ ಚಿತ್ತಾರ ಒಂದು ಹಾಳೆಯ ಮೇಲೆ ನಲ್ಲೆ
ನಾ ಬಿಡಿಸಿದೆ ಚಿತ್ತಾರ 
ನೀ ಬಂದು ನೋಡು ನಲ್ಲೆ
ನನ್ನ ಮನದ ಹತ್ತಿರ 

ನಿನ್ನ ಪ್ರೀತಿ ನನಗೆ
ಈ ಬಾಳು ಬಂಗಾರ 
ನಲ್ಲೆ ನೋಡು ನೀನೇ
ಈ ಪ್ರೇಮ ಮಂದಿರ

ಕುಳಿತಿವೆ ಮರದಲಿ ಹಕ್ಕಿಗಳು 
ನೀ ನೋಡು ಕಿಶೋರಿ 
ಹಸಿರ ಮೇಲೆ ನೀನು
ಬಲು ಸುಂದರಿ 

ನಿನ್ನ ಚಿತ್ತಾರವು ನನ್ನ ಕೈಯಿಂದ
ಪ್ರೀತಿಯ ಉತ್ತರ
ಕುಂಚ ಮೆಚ್ಚುವಂತೆ ನಾನು
ಬಿಡಿಸಿದೆ ಬಹಳ ಸುಂದರ

Comments